Kannada poets biography of williams
ಹರಿಹರ (ಕವಿ)
ಹರಿಹರ : ೧೨ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಶೈವಕವಿ.ಈತನ ಸೋದರಳಿಯನೆ ರಾಘವಾಂಕ.ಹರಿಹರನು ಕೆಲವು ಕಾಲ ನರಸಿಂಹ ಬಲ್ಲಾಳ ರಾಜನಲ್ಲಿ ಕರಣಿಕನಾಗಿದ್ದ.ಹುಟ್ಟಿದ್ದು ಹಂಪೆಯಲ್ಲಿ.
Gish jen biography templateತಂದೆ ಮಹದೇವ ಭಟ್ಟ, ತಾಯಿ ಶರ್ವಾಣಿ,ತಂಗಿ ರುದ್ರಾಣಿ. ಈಕೆ ರಾಘವಾಂಕನ ತಾಯಿ. ಗುರು ಮಾಯಿದೇವ.ಆರಾಧ್ಯ ದೈವ ಹಂಪೆಯ ವಿರೂಪಾಕ್ಷ.
ಪರಿಚಯ
[ಬದಲಾಯಿಸಿ]ಈತ "ರಗಳೆಗಳ ಕವಿ" ಎಂದೆ ಪ್ರಸಿದ್ಧನಾಗಿದ್ದಾನೆ. ಹನ್ನೆರಡನೆಯ ಶತಮಾನದ ಬಹು ಮಹತ್ವದ ಶರಣ ಚಳವಳಿ ಮತ್ತು ವಚನ ಸಾಹಿತ್ಯದ ಪ್ರಭಾವವು ಹರಿಹರನ ಮೇಲೆ ದಟ್ಟವಾಗಿದೆ. ಮೂಲತಃ ಆತನು ಭಕ್ತ ಕವಿ. ಆತನ ಕಾವ್ಯದ ತುಂಬ ಭಕ್ತಿಯು ಓತಪ್ರೋತವಾಗಿ ಹರಿದಿದೆ.
ಹರಿಹರನ ಎರಡೂ ಶತಕಗಳಲ್ಲಿ ಆತನು ಹಂಪೆಯ ಶ್ರೀ ವಿರೂಪಾಕ್ಷನಲ್ಲಿ ತಳೆದಿರುವ ಭಕ್ತಿಯು ಎದ್ದು ಕಾಣುತ್ತದೆ. ಅಂತೆಯೇ ಆತನ ಶಿವಗಣದ ರಗಳೆಗಳಲ್ಲಿ ಶಿವಶರಣರ ಶಿವಭಕ್ತಿಯ ಉಜ್ವಲ ಚಿತ್ರಣವಿದೆ.
ಹರಿಹರನ ಶತಕದ್ವಯವು ಪ್ರಮುಖವಾಗಿ ಆತನ ಆತ್ಮಕಥನಗಳೇ ಆಗಿವೆ. ಗಿರಿಜಾ ಕಲ್ಯಾಣವು ಹರಿಹರನ ಮಹೋನ್ನತ ಚಂಪೂ ಕಾವ್ಯವಾಗಿದೆ. ಆವರೆಗಿನ ಕನ್ನಡಚಂಪೂ ಕೃತಿಗಳಲ್ಲಿ ಕಾಣದ ಕಥಾ ವಿಷಯವು ಇಲ್ಲಿದೆ. ಶೈವ ಪುರಾಣ ಗಳಲ್ಲಿ ಕಂಡು ಬರುವ ಶಿವಪಾವ೯ತಿಯರ ವಿವಾಹದ ಕಥೆ ಗಿರಿಜಾ ಕಲ್ಯಾಣದ ವಸ್ತು.
ಗಿರಿಜೆಯ ಜನನದಿಂದ ಶಿವನೊಡನೆ ಅವಳ ವಿವಾಹದವರೆಗೆ ಮನೋಜ್ಞವಾಗಿ ಅವಳ ಸೌಂದಯ೯, ಸೊಬಗು, ಭಕ್ತಿಯ ಕಠೋರತೆ ಇವುಗಳನ್ನು ಸೂಕ್ಷ್ಮವಾಗಿ ಕವಿಯು ಚಿತ್ರಿಸಿದ್ದಾನೆ.
ಹರಿಹರನ ಕೃತಿಗಳು
[ಬದಲಾಯಿಸಿ]- ಗಿರಿಜಾ ಕಲ್ಯಾಣ ಎಂಬ ಚಂಪೂಕಾವ್ಯ,
- ಪಂಪಾಶತಕ,
- ರಕ್ಷಾಶತಕ,
- ಮುಡಿಗೆಯ ಅಷ್ಟಕ .
- ಶಿವ ಶರಣರರಗಳೆಗಳನ್ನೂ ರಚಿಸಿದ್ದಾರೆ.ಇವುಗಳಲ್ಲಿ ಅರುವತ್ತಮೂರು ಪುರಾತನರು ಶಿವ ಶರಣರ ರಗಳೆಗಳು ಇವೆ.
ಹರಿಹರನ ರಗಳೆಗಳು
[ಬದಲಾಯಿಸಿ]ಹರಿಹರನ ರಗಳೆಗಳಂತೂ ಆತನ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರಗೊಳಿಸಿರುವ ಅಮರ ಕೃತಿಗಳು.
ಹರಿಹರನ ನೈಜಪ್ರತಿಭೆಯು ಇಲ್ಲಿ ಗೋಚರಿಸುತ್ತದೆ. ಅವನ ರಗಳೆಗಳ ಸಂಖ್ಯೆಗಳ ಬಗ್ಗೆ ಗೊಂದಲವಿದೆಯಾದರೂ, ಅವುಗಳ ಸಂಖ್ಯೆಯು ೧೦೬ ಎಂದು ಬಹುತೇಕರ ಅಭಿಪ್ರಾಯವಾಗಿದೆ. ವಿವಿಧ ಗಾತ್ರದ, ಬೇರೆ ಬೇರೆ ಶಿವಶರಣರ ಕಥೆಗಳನ್ನು ಈ ರಗಳೆಗಳಲ್ಲಿ ಹೇಳಲಾಗಿದೆ. ಮುಖ್ಯವಾಗಿ ೬೩ ಪುರಾತನರ, ಅಂದರೆ ತಮಿಳಿನ 'ಪೆರಿಯ ಪುರಾಣ'ದಲ್ಲಿ ಹೇಳಲಾಗಿರುವ ೬೩ ಶಿವಭಕ್ತರ ಕಥೆಗಳು ಇಲ್ಲಿವೆ.
- 'ಬಸವರಾಜದೇವರ ರಗಳೆ',
- 'ತಿರುನೀಲಕಂಠದೇವರ ರಗಳೆ',
- 'ನಂಬಿಯಣ್ಣನ ರಗಳೆ',
- 'ಮಹಾದೇವಿಯಕ್ಕನ ರಗಳೆ',
- 'ಪ್ರಭುದೇವರ ರಗಳೆ',
- 'ಕುಂಬಾರ ಗುಂಡಯ್ಯನ ರಗಳೆ',
- 'ಮಾದಾರ ಚೆನ್ನಯ್ಯ'ನ ರಗಳೆ
- 'ಇಳೆಯಾಂಡ ಗುಡಿಮಾರ'ನ ರಗಳೆ ಮತ್ತು
- 'ರೇವಣಸಿದ್ಧೇಶ್ವರ ರಗಳೆಗಳು' ಹರಿಹರನ ಪ್ರಮುಖ ರಗಳೆಗಳು.
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- Kamath, Suryanath U.
(2001) [1980]. A concise history pleasant Karnataka : from pre-historic times barter the present. Bangalore: Jupiter books. LCCN 80905179.
- Nagaraj, D.R. (2003) [2003]. "Critical Tensions in the History longawaited Kannada Literary Culture". In Sheldon I. Pollock (ed.). Literary Cultures in History: Reconstructions from Southbound Asia.
Berkeley and London: Academy of California Press. pp. 323–383. ISBN .
- Narasimhacharya, R (1988) [1934]. History lecture Kannada Literature. Mysore: Government Organization. Reprinted by Asian Educational Air force, New Delhi. ISBN .
- Rice, E.P. (1982) [1921]. A History of Canarese Literature.Kunchacko boban old lady and baby
New Delhi: Eastern Educational Services. ISBN .
- Sastri, K.A. Nilakanta (2002) [1955]. A history publicize South India from prehistoric nowadays to the fall of Vijayanagar. New Delhi: Indian Branch, University University Press. ISBN .
- Shiva Prakash, H.S. (1997). "Kannada".
In Ayyappapanicker (ed.). Medieval Indian Literature:An Anthology. Sahitya Akademi. ISBN .
- Various (1987) [1987]. Encyclopaedia of Indian literature – vol 1. Sahitya Akademi. ISBN .
- Various (1988) [1988]. Encyclopaedia of Indian information – vol 2.
Sahitya Akademi. ISBN .
- Various (1992) [1996]. Encyclopaedia be totally convinced by Indian literature – vol 5. Sahitya Akademi. ISBN .